“ಓ ಮೈ ಗ್ರೇಡ್ಸ್…..!!!”

lib

ಮಾನ್ಯ ಮಧು ಬಂಗಾರಪ್ಪನವರೇ, ಹಲವು ಸೂಕ್ಷ್ಮ ವಿಚಾರಗಳನ್ನು ನೀವು ಯಾವುದೇ ಒತ್ತಡಕ್ಕೂ ಮಣಿಯದೆ ನಿಮ್ಮದೇ ಶೈಲಿಯಲ್ಲಿ ಕಾರ್ಯಗತಗೊಳಿಸಿರುವುದನ್ನು ನೋಡಿದ್ದೇವೆ. ಈಗಿನ ಪಿ ಯು ಪರೀಕ್ಷಾಪದ್ದತಿ ಯಲ್ಲಿನ ಸೂಕ್ಷ್ಮ ಬದಲಾವಣೆಯ ವಿಚಾರದಲ್ಲಿ ನಿಮ್ಮ ತಂದೆ ಯವರು ರೈತರ ಬಗ್ಗೆ ಯೋಚಿಸಿದ ರೀತಿಯಲ್ಲಿ ಈ ವರ್ಷದ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೀರೆಂದು ಭಾವಿಸುತ್ತೇವೆ. ಇದರಿಂದ ಗೊಂದಲದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳು,ಪೋಷಕರು ಹಾಗು ಅವರ ಶಿಕ್ಷಕರಾದ ನಾವುಗಳು ಒಂದಿಷ್ಟು ನಿರಾಳವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುವವರಾಗುತ್ತೇವೆ.

KCET

ಬದಲಾವಣೆ ಜಗದ ನಿಯಮ, ಪರೀಕ್ಷಾ ಪದ್ದತಿಯಲ್ಲಿನ ಬದಲಾವಣೆ ಶಿಕ್ಷಣ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಿಸುವಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಬಿನ್ನಾಭಿಪ್ರಾಯ ಇರುವುದು ಮದ್ಯ ವಾರ್ಷಿಕ ಪರೀಕ್ಷೆ ಸಮಯದಲ್ಲಿ ಇಂತಹ ಬದಲಾವಣೆ ಮಕ್ಕಳ ಮನಸಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಮೇಲೆ. INTERNAL ASSESSMENT ಹೆಸರಿನಲ್ಲಿ ಒಂದಿಷ್ಟು ಅಂಕಗಳನ್ನು ಕಾಲೇಜು ಮಟ್ಟದಲ್ಲಿ ಕೂಡಾ ಇಟ್ಟಿರುವುದರಿಂದ ಈ ಬದಲಾವಣೆ ಮಕ್ಕಳ ಭವಿಷ್ಯದ ಜೊತೆ ಸರಸ ಆಡಿದಂತಿದೆ.ಇದರ ಪರಿಣಾಮ ಮುಖ್ಯವಾಗಿ ಕಾಣ ಸಿಗುವುದು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಗ್ರಾಮೀಣ ಮಕ್ಕಳಲ್ಲಿ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಗುವಿಗೆ ಇಂಗ್ಲೀಷ್ ಮಾಧ್ಯಮದ ಎಂಟನೇ ತರಗತಿಯ ವಿಚಾರಗಳನ್ನು ಎಷ್ಟು ಕಷ್ಟದಲ್ಲಿ ಅರ್ಥೈಸಬಹುದೋ ಅಷ್ಟು ಕಷ್ಟವಂತೂ ಈಗಿನ ಹೆಚ್ಚಿನ ಮಕ್ಕಳಿಗೆ ಆಗಲಿದೆ ಎಂಬುದೇ ಎಲ್ಲಾ ಶಿಕ್ಷಕರ ಆಭಿಪ್ರಾಯ.

ಯಾರೋ ನಾಲ್ಕು ಜನ ಕುಳಿತು ನಿರ್ಧರಿಸುವ ವಿಚಾರಗಳ ಅಡಿಯಲ್ಲಿ ಪರೀಕ್ಷಾ ವಿಧಾನಗಳು ಬರಬಾರದು ಎಂಬುದೇ ನಮ್ಮ ಆಶಯ.ಜಿಲ್ಲಾ ಕಾರ್ಯಾಗಾರ ಗಳಲ್ಲಿ ಒಮ್ಮೆ ಚರ್ಚಿಸಿ ನಂತರ ಇಂತಹ ನಿರ್ದಾರಗಳಿಗೆ ಬಂದರೆ ಅಂತಹ ವ್ಯವಸ್ಥೆಯಿಂದ ಹೊರಬರುವ ಮಕ್ಕಳ ಭವಿಷ್ಯದ ನಿರ್ಧಾರಗಳು ಅಷ್ಟೇ ವ್ಯವಸ್ಥಿತವಾಗಿರುತ್ತದೆ.

ಪ್ರತೀ ವರ್ಷದ ಮೊದಲ 15 ದಿನದಲ್ಲೇ ವರ್ಷದ ಶೈಕ್ಷಣಿಕ ಕ್ಯಾಲೆಂಡರ್ ನ ಬಿಡುಗಡೆ ಮಾಡಿಸಿ ನೀತಿ-ನಿಯಮ ವಿಚಾರಗಳು…..ಮುಂತಾದ ಮುಖ್ಯ ವಿಚಾರಗಳನ್ನು ಶಿಕ್ಷಕರಿಗೆ ನೀಡಿದರೆ ತಮ್ಮ ಸರ್ವಸ್ವ ಅನ್ನೂ ತೇದು ಮಕ್ಕಳಿಗೋಸ್ಕರವೇ ಬದುಕುತ್ತಿರುವ ಶಿಕ್ಷಕರಿಗೆ ನಿಜವಾಗಿಯೂ ತಮ್ಮ ವಿದ್ಯಾರ್ಥಿಗಳ ಜೀವನವನ್ನು ಉತ್ತಮಗೊಳಿಸುವ ಕೆಲಸ ಇನ್ನೂ ಸುಲಭ ಆದೀತು. ಒಂದು ಮನೆಯನ್ನು ಕಟ್ಟಿಸುವಾಗ ನಾವು ತೆಗೆದುಕೊಳ್ಳುವ ಮುಂಜಾಗೃತೆಗಳ ಮೂರನೇ ಒಂದರಷ್ಟು ಮಕ್ಕಳ ಜೀವನ ಕಟ್ಟುವ ಸರಕಾರ ತೆಗೆದುಕೊಂಡರೆ ಅದಕ್ಕಿಂತ ವೋಟ್ ಬ್ಯಾಂಕ್ ರಾಜಕೀಯ ಮತ್ತೊಂದಿಲ್ಲ.

AI

ಪ್ರಪಂಚ ಮಿಲಿ ಸೆಕೆಂಡಿನಲ್ಲಿ ನಡೆಯೋ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತಹ ಸಿಡಿಲಿನಂತೆ ವೇಗವಾಗಿರುವ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಪಿ ಯು ಬೋರ್ಡ್ ನವರು ಮಧ್ಯವಾರ್ಷಿಕ ಪರೀಕ್ಷೆ ಸಮಯದಲ್ಲಿ ಪರೀಕ್ಷಾ ರೀತಿಯಲ್ಲಿ ಬದಲಾವಣೆ ತಂದರೆ ಮಕ್ಕಳ ಕಥೆ ಕೇಳುವರು ಯಾರು ಎಂಬುದೇ ಉತ್ತರವಿಲ್ಲದ ಪ್ರಶ್ನೆ ಯಾಗಿ ಉಳಿದಿದೆ.(ಕಳೆದ ವರ್ಷ ಕೂಡ KCET ಪರೀಕ್ಷೆ ಬಗ್ಗೆ ಇಲ್ಲಿ ನೆನಪು ಮಾಡಿಕೊಳ್ಳಬಹುದು.)

ಪ್ರೈವೇಟ್ ಅಥವಾ ಉತ್ತಮ ಗುಣಮಟ್ಟದ ಕೋಚಿಂಗ್ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ BOARDS & KCET ಎರಡರಲ್ಲೂ ಒಳ್ಳೆ ಮಾರ್ಕ್ಸ್ ತೆಗೆಯುವ ಅವಕಾಶವಿರುತ್ತದೆ .ಆದರೆ ಹಲವಾರು ಗ್ರಾಮೀಣ ವಿದ್ಯಾರ್ಥಿ KCET MARKS ಗಿಂತ BOARDS MARKS ಅನ್ನು ತೆಗೆದು KCET RANK ಅನ್ನು ಬಲಪಡಿಸುತ್ತೇವೆ ಎಂಬ ವಿಶ್ಸ್ವಾಸದಲ್ಲಿರುತ್ತಾರೆ ಅಂತಹ ಮಕ್ಕಳಿಗೆ ಹಿರಿಯರಾದ ನಾವುಗಳು ಯಾವ ರೀತಿಯ ಸಂದೇಶ ಕೊಟ್ಟ ಹಾಗೆ ಆಗುತ್ತದೆ ನೀವೇ ಹೇಳಿ .

ಒಂದಿಷ್ಟು ಉಪನ್ಯಾಸಕರು ತಮ್ಮ ಸ್ವಂತ ಇಚ್ಛೆ ಇಂದ ಮಕ್ಕಳಿಗೆ IMPORTANT QUESTION/CONCEPT ಹೆಸರಲ್ಲಿ ತಯಾರು ಮಾಡಿರುತ್ತಾರೆ .ಈಗ ಅದೇ ಮಕ್ಕಳ ಮುಂದೆ ಶಿಕ್ಷಕರು ಹೊಸದಾಗಿ ಬಂದಿರುವ ಪರೀಕ್ಷಾ ಪದ್ದತಿ ಯನ್ನು ಕಾರ್ಯಗತಗೊಳಿಸುವುದು ಉಳಿದ ಸಮಯದಲ್ಲಿ ಕಷ್ಟ ಸಾಧ್ಯ,

ನೀವು ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ ಈ ಸೂಕ್ಷ್ಮ ಬದಲಾವಣೆಗಳು ಇದೇ ವರ್ಷ ಜಾರಿ ಮಾಡದೇ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಗೊಳಿಸಬೇಕಾಗಿ ನಿಮ್ಮಲ್ಲಿ ಎಲ್ಲಾ ಮುಗ್ದ ಮನಸ್ಸುಗಳ ಪರವಾಗಿ NEST PUBLICATION(R.) ಮನವಿಗಳು.

Abhishek.N,

Author of NEST KCET Mathematics,
Founder & CEO, Examtech Learning Limited (R.)


NEST PUBLICATIONS(R.)

Karnataka’s Best Publication for NEET and KCET Materials.

hi

error: Content is protected !!