“ಮೊಬೈಲ್ ಬಳಸುವ ಎಲ್ಲರೂ ಹಾಳಾಗುತ್ತಾರಾ…??”

s

ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಹಾನಿಕಾರಕ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಫೋನ್‌ನಲ್ಲಿರುವ ಸ್ಕ್ರೀನ್‌ ಟೈಮ್‌ ಸೆಟ್ಟಿಂಗ್‌ ಪ್ರಕಾರ ಈ ವಾರ ನಾನು ನನ್ನ ಫೋನ್‌ನಲ್ಲಿ 30 ಗಂಟೆ 22 ನಿಮಿಷ ಕಳೆದಿದ್ದೇನೆ. ಅದರಲ್ಲಿ ಅರ್ಧದಷ್ಟು ಅಂದ್ರೆ, 15 ಗಂಟೆ 27 ನಿಮಿಷ ನಾನು ಸೋಷಿಯಲ್‌ ಮೀಡಿಯಾದಲ್ಲಿ ಕಳೆದಿದ್ದೇನೆ. ನಾನು ಪ್ರತಿದಿನ ಎಚ್ಚರದಲ್ಲಿರುವ ಸಮಯದಲ್ಲಿ, ಶೇಕಡ 10ರಷ್ಟು ಸಮಯವನ್ನು ನಿಯಮಿತವಾಗಿ ಮೊಬೈಲ್‌ ಫೋನ್‌ ಮುಂದೆ ಕಳೆಯುತ್ತಿದ್ದೇನೆ ಎಂಬ ಅಂಶ ಅತ್ಯಂತ ಮುಜುಗರದ ಸಂಗತಿಯಾಗಿದೆ.

ಆದರೆ, ಈ ಸೋಷಿಯಲ್‌ ಮೀಡಿಯಾವನ್ನು ತಪ್ಪಿಸಿಕೊಳ್ಳುವುದು ಹೇಗೆ?

ಎಲ್ಲರ ಆಸಕ್ತಿಗೆ ತಕ್ಕಂತಹ ವಿಚಾರಗಳು ಮೊಬೈಲ್‌ ಫೋನ್‌ನಲ್ಲಿ ಕೈಗೆ ಸಿಗುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಇದು ವಿಡಂಬನೆ ಎನ್ನುವುದು ಗೊತ್ತು. ಆದರೆ, ಸಾಮಾಜಿಕ ಮಾಧ್ಯಮವನ್ನು ವ್ಯಸನಕಾರಿಯಾಗಿ ವಿನ್ಯಾಸ ಮಾಡಲಾಗಿರುತ್ತದೆ. ಬೇಡ, ಸೋಷಿಯಲ್‌ ಮೀಡಿಯಾ ಸಾಕು ಎಂದು ಹೊರಗೆ ಬರಲು ಪ್ರಯತ್ನಿಸಿ. ಆಗ ಸ್ನೇಹಿತರೊಬ್ಬರು ಶೇರ್ ಮಾರ್ಕೆಟ್ ಲಿ ದುಡ್ಡು ಮಾಡುವುದು ಹೇಗೆ ಎಂಬುದರ ಕುರಿತು ವೀಡಿಯೊವನ್ನು ನನಗೆ ಕಳುಹಿಸುತ್ತಾರೆ. ಮತ್ತೆ ನಾನು ಆ ದುಡ್ಡಿನಲ್ಲೇ ಮುಳುಗುತ್ತೇನೆ. ಮದ್ಯ ವಯಸ್ಕರಾದ ನಮಗೇ ಇಂತಹ ಅನುಭವ ಆಗುತ್ತದೆ ಎಂದರೆ ಪ್ರೌಢವಾಸ್ಥೆಯ ಹೊಸ್ತಿಲಲ್ಲಿ ನಿಂತ ಬಿಸಿ ರಕ್ತದ ಹುಡುಗ ಹುಡುಗಿಯರ ಕಥೆ ಏನಿರಬಹುದು ನೀವೇ ಯೋಚಿಸಿ .

ನನ್ನ ಆಸಕ್ತಿಗೆ ದುಡ್ಡು ಮಾಡುವುದನ್ನು ನನಗೆ ಸೋಷಿಯಲ್‌ ಮೀಡಿಯಾ ತೋರಿಸಬಹುದು. ಆದರೆ, ಮಕ್ಕಳಿಗೆ ಸ್ಕ್ರೀನ್‌ ಇನ್ನಷ್ಟು ಕೆಟ್ಟದಾಗಿರಬಹುದು. ಅವರಿಗೆ ದುಡ್ಡು ಮಾಡುವುದರ ಬದಲಿಗೆ, ಆತ್ಮಹತ್ಯೆ ,ಸಮಾಜ ಘಾತುಕ ವಿಚಾರಗಳು ,ಹಿಂಸೆಯಂತಹ ಪ್ರಚೋದನಕಾರಿ ವಿಡಿಯೋಗಳು ಕಾಣಿಸಬಹುದು. “ಮನೋಶಾತ್ರೋಜ್ಞರಾದ ಡಾ.ಪ್ರಸನ್ನ ಅವರು ಹೇಳುವ ಪ್ರಕಾರ ಇಂದು ಹದಿಹರೆಯದವರಲ್ಲಿ ಶೇಕಡ 95ರಷ್ಟು ಮಕ್ಕಳು ಸೋಷಿಯಲ್‌ ಮೀಡಿಯಾದಲ್ಲಿದ್ದಾರೆ” . ಅವರ ಪ್ರಕಾರ “ಮಕ್ಕಳು ನಿರಂತರವಾಗಿ ಸೋಷಿಯಲ್‌ ಮೀಡಿಯಾ ನೋಡುತ್ತಾರೆ, ಅವರನ್ನು ಮನೆಯಲ್ಲಿ ಮೊಬೈಲ್‌ ನೋಡದಂತೆ ಹೇಳಿದರೂ ಅವರು ಅದನ್ನು ಆಟದ ಮೈದಾನದಲ್ಲಿ, ಶಾಲೆಯಲ್ಲಿ ನೋಡುತ್ತಾರೆ”.ಇನ್ನೂ ಕಟ್ಟು ನಿಟ್ಟು ಮಾಡಿದ್ದೇ ಆದರೆ ತಂದೆ ತಾಯಿಯ ಮೇಲೆಯೇ ಮುಗಿಬೀಳೋ ಸಂಪ್ರದಾಯ ಕೂಡ ಬೆಳೆಯುತ್ತಿದೆ.ಕಳೆದ ವರ್ಷ ಪಬ್ ಜಿ ಆಡಲು ಬಿಡಲಿಲ್ಲ ಎಂದ ಕಾರಣಕ್ಕೆ ಅಪ್ಪನನ್ನೇ ಕೊಂದು ಜೈಲಿಗೆ ಹೋದ ಸುದ್ದಿ ನಿಮಗೆಲ್ಲ ನೆನಪಿರಬಹುದು.

STRESS

ಅಮೆರಿಕದ ಪ್ರಧಾನ ಸರ್ಜನ್ ವಿವೇಕ್ ಮೂರ್ತಿ ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಎಚ್ಚರಿಕೆ ನೀಡಿದ್ದರು. ಸೋಷಿಯಲ್‌ ಮೀಡಿಯಾವು ಹದಿಹರೆಯದವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದರು.

ಡಾ.ಪ್ರಸನ್ನ ಪ್ರಕಾರ “ಕಳೆದ ಮೂರು ವರ್ಷಗಳಲ್ಲಿ 19 ವರ್ಷದೊಳಗಿನವರ ಆತ್ಮಹತ್ಯೆ ಶೇಕಡ 20ರಷ್ಟು ಹೆಚ್ಚಾಗಿದೆ. ಕಾರ್‌ ಕ್ರ್ಯಾಷ್‌, ಆತ್ಮಹತ್ಯೆ, ಡ್ರಗ್‌ ಸೇವನೆ (ಓವರ್‌ಡೋಸ್‌) ಇತ್ಯಾದಿಗಳಿಂದ ಸಾವು ಹೆಚ್ಚಾಗಿದೆ. ಕೊರೊನಾ ಬಳಿಕ ಇಂತಹ ಘಟನೆಗಳು ಹೆಚ್ಚಾಗಿವೆ. ಕೊರೊನಾ ಸಮಯದಲ್ಲಿ ಅತಿಯಾದ ಮೊಬೈಲ್‌ ಬಳಕೆಯೂ ಇದಕ್ಕೆ ಕಾರಣ ಇರಬಹುದು.ಹಾಗೆಂದ ಮಾತ್ರಕ್ಕೆ ಮೊಬೈಲ್ ಬಳಸುವ ಎಲ್ಲರೂ ಹಾಳಾಗುತ್ತಾರೆ ಎಂದಲ್ಲ Zepto Aadil Palicha ತನ್ನ 19ನೇ ವಯಸ್ಸಿಗೇ ಸಾವಿರ ಕೋಟಿ ಆಸ್ತಿ ಗಳಿಸಿದ್ದರು ,ಹಾಗೆ ಹುಡುಕಿದರೆ ಹಲವರು ನಮ್ಮ ಕಣ್ಣಿಗೆ ಕಾಣಿಸುತ್ತಾರೆ.ಅದಕ್ಕೆಲ್ಲ ಕಾರಣ ಮೊಬೈಲ್ ಅನ್ನು ಬಳಸುವ ರೀತಿಯಲ್ಲಿ ಬಳಸಿದ್ದು.

ಹದಿನಾಲ್ಕು ವರ್ಷದ ಬಾಲಕ ಈಗ ಹೊರಗಡೆ ಸ್ನೇಹಿತರನ್ನು ಮಾಡಲು ಬಯಸುವುದಿಲ್ಲ. ಹೊರಗೆ ಜನರೊಂದಿಗೆ ಬೆರೆಯುವ ಮನೋಭಾವ ಮಕ್ಕಳಲ್ಲಿ ಕಡಿಮೆಯಾಗಿದೆ”. ಇಂದಿನ ಮಕ್ಕಳಿಗೆ R&R ಅಗತ್ಯವಿದೆ. R&R ಅಂದರೆ REST & RELAX ಅಲ್ಲ, RESEARCH & REGULATIONS ಅಗತ್ಯವಿದೆ. ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮದ ಹಾನಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು ಮತ್ತು ಇದಕ್ಕೊಂದು ಸೂಕ್ತ ನಿಯಂತ್ರಣದ ಅಗತ್ಯವಿದೆ.”ಸಾಮಾಜಿಕ ಮಾಧ್ಯಮ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲಿನ ಪರಿಣಾಮದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕು” ಎಂದು . “ಕಂಪನಿಗಳಿಂದ ಸಂಗ್ರಹಿಸಲಾದ ಬೃಹತ್ ಪ್ರಮಾಣದ ಡೇಟಾ ಮತ್ತು ಅವರ ಅಲ್ಗಾರಿದಮ್‌ಗಳ ಪ್ರಭಾವದ ಆಧಾರದಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮವನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಉಪಯೋಗದಿಂದ ಅಧ್ಯಯನ ಮಾಡಬಹುದು”.ಆದರೂ ಭ್ರಷ್ಟ ಹಾಗು ದಡ್ಡ ,ದೂರದೃಷ್ಟಿ ಇಲ್ಲದ ರಾಜಕಾರಣಿಗಳಿಂದ “ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸುವ ಆರೋಗ್ಯದ ಎಚ್ಚರಿಕೆ ಸಂದೇಶಗಳು, ಆಲ್ಕೋಹಾಲ್‌ ಆರೋಗ್ಯಕ್ಕೆ ಹಾನಿಕಾರಕ, ಸಿಗರೇಟ್‌ನಿಂದ ಕ್ಯಾನ್ಸರ್‌ ಸಂಭವಿಸುತ್ತದೆ” ಇತ್ಯಾದಿಗಳು ಮಕ್ಕಳ ಕಣ್ಣಿಗೆ ಕಾಣಿಸದ ರೀತಿ ಇರುತ್ತವೆ.

ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದಲ್ಲಿ ಸೋಷಿಯಲ್‌ ಮೀಡಿಯಾ ಕೆಟ್ಟದು ಎನ್ನುವುದನ್ನು ಸಾಬೀತುಪಡಿಸುವುದು ಇಂದಿನ ತುರ್ತು.

ರಾಜಕಾರಣಿಗಳು ಭ್ರಷ್ಟಾಚಾರ ಮಾಡುವ ಸಮಯದ 1೦% ಸಮಯವನ್ನು ಇಂತಹ ವಿಚಾರಗಳಿಗೆ ಮೀಸಲಿಟ್ಟರೆ ಮಾತ್ರ ಭಾರತದಂತಹ ಬೃಹತ್ ಸಮಾಜದ ಆರೋಗ್ಯ ಕಾಪಾಡಬಹುದು ಎಂಬುದು ನಮ್ಮ ಅನಿಸಿಕೆ.

Abhishek.N,

Author of NEST KCET Mathematics,
Founder & CEO, Examtech Learning Limited (R.)


NEST PUBLICATIONS(R.)

Karnataka’s Best Publication for NEET and KCET Materials.

hi

error: Content is protected !!