“ಅಬ್ಬಬ್ಬಾ ಏಲಿಯನ್ MUSK”

ROCKET

ಅಕ್ಟೋಬರ್ 13 2024, ಬಾಹ್ಯಾಕಾಶ ಇತಿಹಾಸದಲ್ಲೆ ಒಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ದಿನ. ವಿಶ್ವದೆಲ್ಲೆಡೆ ಇರುವ ಬಾಹ್ಯಾಕಾಶ ಆಸಕ್ತರನ್ನು ತನ್ನೆಡೆಗೆ ಆಕರ್ಷಿಸುವಲ್ಲಿ ಭೂಮಿಯಲ್ಲಿ ವಾಸಿಸುತ್ತಿರುವ ಏಲಿಯನ್ ಎಂದೇ ಅತಿ ಬುದ್ದಿವಂತರಿಂದ ಕರೆಸಿಕೊಳ್ಳುವ ಎಲನ್ ಮಸ್ಕ್ ಒಡೆತನದ SPACEX ಸಂಸ್ಥೆ ಯಶಸ್ವಿಯಾಗಿದೆ. ಮುಂಬರುವ ಬಾಹ್ಯಾಕಾಶ ಅನ್ವೆಷಣೆಗೆ ಇಂದಿನ ಒಂದು ಪ್ರಯೋಗ ಮುನ್ನುಡಿ ಬರೆದಿದೆ ಎಂದರೆ ಅತಿಯೋಶಕ್ತಿ ಆಗುವುದಿಲ್ಲ.ರಾಕೆಟ್ ಉಡಾವಣೆಯೇ ದೊಡ್ಡ ಸಾಧನೆ ಎಂದುಕೊಂಡಿದ್ದ ಮನುಜ ಕುಲಕ್ಕೆ ಹೀಗೂ ಯೋಚಿಸಿ ನೋಡಿ ಎಂದು ತೋರಿಸಿಕೊಟ್ಟಿದ್ದೆ ವಿಜ್ಞಾನ ಲೋಕದ ದಿಗ್ಗಜ ಎಲನ್ ಮಸ್ಕ್ .

ಅತ್ಯಾಧುನಿಕ ಆವಿಷ್ಕಾರವಾದ ‘ಮೆಕಾಜಿಲ್ಲಾ’ ಎಂಬ 23 ಅಂತಸ್ತಿನ ಕಟ್ಟಡದಷ್ಟು ಎತ್ತರದ STARSHIP ಅನ್ನು ಉಡಾವಣೆ ಮಾಡುವುದಷ್ಟೇ ಅಲ್ಲದೇ ಆ STARSHIP ಅನ್ನು ಯಶಸ್ವಿಯಾಗಿ ಸ್ವಸ್ಥಾನಕ್ಕೆ ಬರುವಂತೆ ಮಾಡಲು SPACEX ಸಂಸ್ಥೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿದೆ. ಈ ತಂತ್ರಜ್ಞಾನವನ್ನೇ ಇಂದು ಬೂಸ್ಟರ್ ಕ್ಯಾಚ್ ಎಂದು ಕರೆಯಾಗುತ್ತಿದೆ . ಮರುಬಳಕೆಯ ರಾಕೆಟ್‍ಗಳ ಅನ್ವೇಷಣೆಯಲ್ಲಿ ತೊಡಗಿರುವ SPACEX ಸಂಸ್ಥೆಗೆ ಈ ಪ್ರಯೋಗದ ಯಶಸ್ಸು ಒಂದು ಹೊಸ ಹುರುಪು ಬಂದಂತಾಗಿದೆ. ಇದು ಬಾಹ್ಯಾಕಾಶಯ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡುವತ್ತ ದಾಪುಗಾಲು ಹಾಕಿದೆ.ಇನ್ನೇನು ಸದ್ಯದಲ್ಲೇ ಮನುಷ್ಯ ರನ್ನು ಒಳಗೊಂಡ STARSHIP ಅನ್ನು ಬಾಹ್ಯಾಕಾಶ ಗೆ ಕಳುಹಿಸಿ ಮತ್ತೆ ಅದೇ STARSHIP ನಲ್ಲೇ ಭೂಮಿಗೆ ಮರಳುವ SCI-FI ಸಿನಿಮಾದ ಕಥೆಗಳು ನಿಜವಾಗುವುದರಲ್ಲಿದೆ .

ಅಕ್ಟೋಬರ್ 13 2024 ರಂದು SPACEX ತನ್ನ SUPER HEAVY STARSHIP ರಾಕೆಟ್ ಅನ್ನು ಟೆಕ್ಸಾಸ್‍ನ ಬೋಕಾ ಚಿಕಾದಿಂದ ನಭಕ್ಕೆ ಉಡಾವಣೆ ಮಾಡಲಾಯಿತು. ಇದು ಪ್ರಸ್ತುತ ವಿಶ್ವದ ಅತ್ಯಂತ ಶಕ್ತಿಶಾಲಿ STARSHIP ಆಗಿದ್ದು 33 ಮೀಥೇನ್ ಉಪಯೋಗಿಸುವ ಅತ್ಯಾದುನಿಕ ರಾಪ್ಟರ್ ಎಂಜಿನ್ನನ್ನು ಹೊಂದಿದೆ. ಇದಕ್ಕೆ ಸೂಪರ್ ಹೆವಿ ಬೂಸ್ಟರ್ ಎಂಬ ಮತ್ತೊಂದು ರಾಕೆಟ್ ಅನ್ನು ಜೋಡಿಸಲಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ ಈ ಬೂಸ್ಟರ್ ನಮ್ಮ ಬಸ್ಸಿನ ತರಹ ಕೆಲಸ ಮಾಡುತ್ತದೆ. ಅಂದರೆ STARSHIP ಸಹಿತ ಬೂಸ್ಟರ್ ಊಡಾವಣ ಕೇಂದ್ರದಿಂದ ನಭಕ್ಕೆ ಚಿಮ್ಮಿದ ನಂತರ STARSHIP ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಬೂಸ್ಟರ್ ಮರಳಿ ಸ್ವಸ್ಥಾನಕ್ಕೆ ಬರುತ್ತದೆ. ಈ ಬೂಸ್ಟರನ್ನು ಮತ್ತೆ ಮತ್ತೆ ಬಳಸಬಹುದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಸ್ಪೆಸ್ ಎಕ್ಸ್ ಮರಳಿ ಹಿಂತಿರುಗುವ ಬೂಸ್ಟರ್ ಅನ್ನು 23 ಅಂತಸ್ತಿನ ಎತ್ತರದ ಲೋಹದ ಕ್ಕಟ್ಟಡದಲ್ಲಿರುವ ಬೃಹತ್ತಾದ ಬಾಹುಗಳಿಂದ ಬಂಧಿಸುವಂತೆ ಮಾಡಿದೆ. ಈ ಭಂದಿಸುವ ಕಾರ್ಯವನ್ನು SPACEX ಹಲವಾರು ವೈಫಲ್ಯದ ನಂತರ ಯಶಸ್ವಿಯಾಗಿ ಪೂರೈಸಿದೆ.

ವಿಜ್ಞಾನಕ್ಕೆ ಯಾವುದೂ ಅಸಾಧ್ಯವಲ್ಲ.

ಈ ಸಾಧನೆಯು ಬಾಹ್ಯಾಕಾಶ ಉದ್ಯಮಕ್ಕೆ ಮತ್ತು ಸ್ವತಃ SPACEX ಸಂಸ್ಥೆಗೆ ಪ್ರಮುಖ ಮೈಲಿಗಲ್ಲು. ರಾಕೆಟ್ ಬೂಸ್ಟರ್‍ಗಳನ್ನು ಹಿಡಿಯುವ ಮತ್ತು ಮರುಬಳಕೆ ಮಾಡುವ ಸಾಮರ್ಥ್ಯವು ಬಾಹ್ಯಾಕಾಶ ಪ್ರಯಾಣದ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಮಾನವರನ್ನು ಕಳಿಹಿಸುವ ಯೋಜನೆಗೆ ಈ ಪ್ರಯೋಗ ಮುನ್ನುಡಿಯಾಗಿದೆ.

ಮುಂದೊಂದು ದಿನ ಭ್ಯಾಹ್ಯಾಕಾಶ ಪ್ರಯಾಣವು ಜನಸಾಮಾನ್ಯರಿಗೆ ಕೈಗೆಟುಗುವಂತಾಗಲಿ. ಇಂತಹ ಮಹತ್ಕಾರ್ಯ ಸಾಧನೆಗೆ ಎಲಾನ್ ಮಸ್ಕ್ ಹಾಗೂ ಅವರ ತಂಡದ ವಿಜ್ಞಾನಿಗಳಿಗೆ ಅಭಿನಂದನೆಗಳು. ಶುಭವಾಗಲಿ.

ಲೇಖಕರು ,
ಕೃಷ್ಣ ಚೈತನ್ಯ ,

ಗಣಿತ ಉಪನ್ಯಾಸಕರು,ತುರುವೇಕೆರೆ.


NEST PUBLICATIONS(R.)

Karnataka’s Best Publication for NEET and KCET Materials.




error: Content is protected !!