“ಪ್ರಥಮ ಪಿ ಯು ಪರೀಕ್ಷೆ ಕಥೆ-ವ್ಯಥೆ”

ame

“ಪ್ರಥಮ PUC ಗೆ ಯಾವ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ನೀಲನಕ್ಷೆ ಯನ್ನು ಅನುಸರಿಸಬೇಕು.

ಬಂಟಿ ನಿನ್ನ ಸೋಪ್ ಸ್ಲೋ ನ….?

ಜಾಹಿರಾತು ಹಳೆಯದಾದರೂ ಆಗ್ಗಾಗ್ಗೆ ಕರ್ನಾಟಕ ಪಿ ಯು ಉಪನ್ಯಾಸಕರಲ್ಲಿ ಈ ಮಾತು ನೆನಪಿಗೆ ಬರುತ್ತಲೇ ಇರುತ್ತದೆ.

AI ಉಪಯೋಗಿಸಿ ಕ್ಷಣ ಕ್ಷಣಕ್ಕೂ ಜಗತ್ತು ಬದಲಾಗುತ್ತಿರುವ ಈ ಸಮಯದಲ್ಲಿ ಪಿ ಯು ಬೋರ್ಡ್ ಮಾತ್ರ ಅಮೆಗಿಂತ ನಿಧಾನವಾಗಿ ಕುಂಟುತ್ತಾ ಹೋಗುತ್ತಿದೆ ಎಂದರೆ ತಪ್ಪಾಗಲಾರದು.
ಶೈಕ್ಷಣಿಕ ವರ್ಷ ಶುರುವಾಗಿ 3-4 ತಿಂಗಳ ನಂತರ ದ್ವಿತೀಯ PUC ಮಾದರಿ ಪ್ರಶ್ನೆ ಪತ್ರಿಕೆ ಮತ್ತು ನೀಲನಕ್ಷೆ ಬಿಡುಗಡೆ ಗೊಳಿಸಿ ಶಿಕ್ಷಕರ ಕೆಂಗೆಣ್ಣಿಗೆ ಗುರಿಯಾಗಿದ್ದ ಪಿ ಯು ಬೋರ್ಡ್ ,ಪ್ರಥಮ PUC ಯ ವಿಚಾರದಲ್ಲಿ ಇನ್ನು ಎಚ್ಚರ ಗೊಂಡಿಲ್ಲ.

ಕಳೆದ ವರ್ಷ JEE-MAINS ನಲ್ಲಿ 99.3 Percentile ತೆಗೆದರೂ ಸುರತ್ಕಲ್ ನಲ್ಲಿ ಬೇಕಾದ ವಿಭಾಗದಲ್ಲಿ ಸೀಟು ಸಿಗಲಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತ ಒಬ್ಬಳು ವಿದ್ಯಾರ್ಥಿನಿ ಹೇಳಿದ್ದು ಇಷ್ಟೇ: “ಸರ್ ಒಂದೇ ಒಂದು Question ಸರಿಯಾಗಿದ್ದರೆ ಇಂದು NITK- ಸುರತ್ಕಲ್ ನಲ್ಲಿ ಸೀಟ್ ಸಿಗುತ್ತಿತ್ತು” ಎಂದು.


ನೂರಾರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಿ, ಸಾವಿರಾರು ಪ್ರಶ್ನೆಗಳನ್ನು ಓದಿ ,ರಾತ್ರಿಯೆಲ್ಲಾ ನಿದ್ದೆಗೆಟ್ಟು ತನ್ನ ಕೆರಿಯರ್ ಅನ್ನು ಭದ್ರಗೊಳಿಸಬೇಕು ಎನ್ನುವ ಮಕ್ಕಳು ಪ್ರಥಮ ಪಿ ಯು ಸಿ ಯ ಮೊದಲನೇ ದಿನದಿಂದಲೇ ಶಿಸ್ತಿನಿಂದ ಓದುತ್ತಿರುತ್ತಾರೆ.ಇಂತಹ ಸ್ಪರ್ಧಾ ಜಗತ್ತಿನಲ್ಲಿ ಶೈಕ್ಷಣಿಕವಾಗಿ ಮಕ್ಕಳು ಒಳಗೊಳ್ಳುವಂತಹ ಕೆಲವೊಂದು ಮುಖ್ಯ ವಿಚಾರಗಳ ತೀರ್ಮಾನವನ್ನು 3-4 ತಿಂಗಳು ತಡವಾಗಿ ತೆಗೆದು ಕೊಂಡರೆ ಮಕ್ಕಳ ಜೀವನದೊಂದಿಗೆ ಆಟ ಆಡಿದಂತಲ್ಲವೇ .ಆ ಮುಂದಿನ ಪೀಳಿಗೆಯ ಮಕ್ಕಳು ಪಿ ಯು ಬೋರ್ಡ್ ನಷ್ಟು ಸ್ಲೋ ಆದರೆ ನಿಜವಾಗಿಯೂ ನಮ್ಮ ದೇಶ 2047 ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆಂದು ನಿಮಗೆ ಅನಿಸುತ್ತದೆಯೇ,

ಇದನ್ನೆಲ್ಲಾ ನೋಡಿಕೊಂಡೂ ನಮಗೆ ಅನ್ನಿಸುವುದೇ ಒಂದೇ : ಶಿಕ್ಷಕ ಕ್ಷೇತ್ರದಿಂದ ಗೆದ್ದಿರುವ ರಾಜಕೀಯ ಪ್ರವೀಣರು ಎಲ್ಲಿದ್ದಾರೆ ಎಂದು.ನಾವು ನೋಡಿದಂತೆ ಪ್ರತಿಯೊಬ್ಬ MLC ಗೂ ಬೇರೆ ಬೇರೆ ಬಿಸಿನೆಸ್ ಇರುತ್ತದೆ , ಆದರೆ ಆ ಎಲ್ಲಾ BUISNESS ಗಳು ಸಾಮಾಜಿಕವಾಗಿ,ಆರ್ಥಿಕವಾಗಿ ,ತಾಂತ್ರಿಕವಾಗಿ ಎಲ್ಲಾ ರೀತಿಯಲ್ಲೂ ಅಪ್ಡೇಟ್ ಇರತ್ತದೆ.ಅದರ 10% ಗಾಂಭೀರ್ಯತೆ ಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಏನೇನು ಮಾಡುತ್ತಿವೆ ಎಂದು 3 ತಿಂಗಳಿಗೊಮ್ಮೆ ವಿಚಾರಿಸಿದರೂ ಈಗಿನ ಪರಿಸ್ಥಿತಿ ಸುಧಾರಿಸುವುದರಲ್ಲಿ ಸಂದೇಹವೇ ಇಲ್ಲ.


ಈಗಿನ ಕಾಲಕ್ಕೆ ತಕ್ಕಂತೆ ಯೋಚಿಸುವ ನೂರಾರು ಯುವಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಕನಿಷ್ಠ ಪಕ್ಷ ಅವರ ಸಹಾಯ ಆದರೂ ತೆಗೆದುಕೊಂಡು ಲಕ್ಷಾಂತರ ಮಕ್ಕಳ ಜೀವನ ಕಟ್ಟುವ ಕೆಲಸವನ್ನು ಜವಾಬ್ದಾರಿಯುತ ವಾಗಿ ಮಾಡಿ ಎಂದು ಆ ಮುಗ್ದ ಮನಸ್ಸುಗಳ ಪರವಾಗಿ NEST PUBLICATIONS (R.) ಮನವಿಗಳು.

Abhishek.N,

Author of NEST KCET Mathematics,
Founder & CEO, Examtech Learning Limited (R.)


NEST PUBLICATIONS(R.)

Karnataka’s Best Publication for NEET and KCET Materials.

hi

error: Content is protected !!