ಮಣಿಪುರಕ್ಕಿಂತ ಚಿಕ್ಕದಿರುವ ಇಸ್ರೇಲ್ ಪ್ರಪಂಚಕ್ಕೆ ಶಕ್ತಿಶಾಲಿಯಾಗಿದ್ದು ಹೇಗೆ…??
ಇಸ್ರೇಲ್ ಯುದ್ಧದ ವಿಚಾರದಲ್ಲಿ ಏನು ಸರಿ ಮಾಡುತ್ತಿದೆ – ಏನು ತಪ್ಪು ಮಾಡುತ್ತಿದೆ ಎನ್ನುವುದರ ಬಗ್ಗೆ ಮಾತ್ರ ಯೋಚಿಸುವ ನಮ್ಮ ದೇಶದ ಯುವ ಸಮುದಾಯ, ಶಿಕ್ಷಕ ಸಮುದಾಯಕ್ಕೆ ಇಸ್ರೇಲ್ 70 ರ ದಶಕದಲ್ಲೇ ಏನೇನು ಹೊಸ ತಿದ್ದುಪಡಿಗಳನ್ನು ಮಾಡಿತ್ತು ಎಂದು ತಿಳಿದುಕೊಂಡರೆ ಮಾತ್ರ ನಮ್ಮ ದೇಶ ಕೂಡ ಆ ಅಭಿವೃದ್ಧಿ ದಾರಿಯಲ್ಲಿ ಮುನ್ನೆಡೆಯಬಹುದು ಎನಿಸುತ್ತದೆ. ಸ್ವಲ್ಪ ಬುದ್ದಿವಂತರಂತೆ ಯೋಚಿಸಿ ನೋಡಿ ,ನಮ್ಮ ಮಣಿಪುರ ಗಿಂತ ಚಿಕ್ಕದಾಗಿರುವ ಆ ಪುಟ್ಟ ದೇಶದಲ್ಲಿ ಪ್ರತಿ 10,000 ಜನಕ್ಕೆ 140 ವಿಜ್ಞಾನಿಗಳು ,ಕಳೆದ ದಶಕದಲ್ಲಿ 9000 ಸಾವಿರಕ್ಕಿಂತ ಹೆಚ್ಚು START UP ಗಳು ಇಸ್ರೇಲ್ ಬಿಟ್ಟರೆ ಯಾವ ದೇಶದ್ಲಲೂ ಕಾಣಸಿಗುವುದಿಲ್ಲ. stuxnet ವೈರಸ್ ಬಗ್ಗೆ ಗೂಗಲ್ ಮಾಡಿದರೆ ನಿಮಗೆ ಇಸ್ರೇಲ್ ನ ಅದಮ್ಯ ಬುದ್ಧಿವಂತಿಕೆಯ ಪರಿಚಯ ಆಗುವುದು. ಭಾರತದಲ್ಲಿ ಇತ್ತೀಚಿಗೆ ಉಪಯೋಗಿಸುತ್ತಿರುವ ಹಲವಾರು ಅತ್ಯಾಧುನಿಕ ಎಂದು ಕರೆಯಲ್ಪಡುವ ತಂತ್ರಜ್ಞಾನಗಳು 70 ದಶಕದಿಂದಲೇ ಇಸ್ರೇಲ್ ನಲ್ಲಿ ಉಪಯೋಗಿಸಲ್ಪುಡುತ್ತಿದ್ದವು ಎಂದರೆ ನಿಜವಾಗಿಯೂ ಆಶ್ಚರ್ಯ ಆಗುವುದಿಲ್ಲವೇ …???

CODING,ROBOTICS….ಮುಂತಾದ HI-END TECHNOLOGY ಗಳನ್ನು ನಮ್ಮ ದೇಶದಲ್ಲಿ 2024 ರಲ್ಲಿಯೂ 5-6 ನೇ ತರಗತಿಗಳಿಗೆ ಕಲಿಸಬೇಕೇ/ಬೇಡವೇ ಎನ್ನುವುದರ ಬಗ್ಗೆ ಯೋಚಿಸುವುದೇ ನಮ್ಮ ದಡ್ಡ ರಾಜಕಾರಣಿಗಳ ಕೆಲಸವಾಗಿದೆ ಮತ್ತು ಅಂತಹವರನ್ನು ಪದೇ ಪದೇ ಆರಿಸಿ ನಮ್ಮ ದೇಶ ಯಾಕೆ ಉದ್ದಾರ ಆಗಲ್ಲ ಎನ್ನುವುದೇ ನಮ್ಮ ಜನಗಳ ದೊಡ್ಡ ಪ್ರಶ್ನೆಯಾಗಿರುವುದು ನೋಡಿದರೆ ಇದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೊಂದಿಲ್ಲ.
ಇಸ್ರೇಲ್ ನಲ್ಲಿ ಕೋಡಿಂಗ್ ,ರೊಬೊಟಿಕ್ಸ್ ವಿಚಾರದಲ್ಲಿ ಒಬ್ಬ ಶಿಕ್ಷಕ ನಿಗೆ ಇರುವ ಜ್ಞಾನ ನಮ್ಮ ದೇಶದ ದೊಡ್ಡ ಹೆಸರಿರುವ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಿಂತ ಹೆಚ್ಚು ,ಯಾವಾಗ ಶಿಕ್ಷಕರಿಗೆ ಸಂಬಳ ಜಾಸ್ತಿ ಆಗುತ್ತದೆ ಆಗ ಬುದ್ದಿವಂತ ಎಂದೆನಿಸುವ ಎಲ್ಲರೂ ಶಿಕ್ಷಕ ಕ್ಷೇತ್ರಕ್ಕೆ ಬರಲು ಶುರು ಮಾಡುತ್ತಾರೆ ಎನ್ನುವ, ಎಲ್ಲರಿಗೂ ಅರ್ಥ ಆಗುವ ಚಿಕ್ಕ ವಿಚಾರವನ್ನು ಪ್ರಪಂಚದಲ್ಲೇ ಮೊದಲು ಅರ್ಥ ಮಾಡಿಕೊಂಡಿರುವುದು ಇಸ್ರೇಲ್ ,ಹಾಗಾಗಿಯೇ ಇಂದು ಪ್ರಪಂಚದ ಶಕ್ತಿಶಾಲಿಗಳ ಪಟ್ಟಿಯಲ್ಲಿ ಆ ದೇಶವಿರುವುದು.ಈಗ ಇಸ್ರೇಲ್ ಶಿಕ್ಷಕರ ಸರಾಸರಿ ಸಂಬಳ ವರ್ಷಕ್ಕೆ ಬರೋಬ್ಬರಿ 57 ಲಕ್ಷ.(ನೆನಪಿಡಿ,ಭಾರತ ದೇಶದ ಸರಾಸರಿ ವರ್ಷಕ್ಕೆ 3 ಲಕ್ಷಗಿಂತ ಕಡಿಮೆ)
ಎಲ್ಲಾ ಕೆಲಸಗಳಿಗಿಂತ ಹೆಚ್ಚು ಬುದ್ದಿವಂತರ ಅವಶ್ಯಕತೆ ಇರುವ ಶಿಕ್ಷಕ ಕ್ಷೇತ್ರಕ್ಕೆ ಯಾವುದೇ ಸರ್ಕಾರ ಬಂದರೂ ಸರಾಸರಿ ಸ್ಯಾಲರಿ ಯನ್ನು ಹೆಚ್ಚಿಸುವ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ.ಶಿಕ್ಷಕ ಕ್ಷೇತ್ರಕ್ಕೆ ಅಂತಲೇ ಮೀಸಲಿಟ್ಟಿರುವ MLC ಸೀಟಿಗೂ ಈಗ ಪೂರ್ಣ ಪ್ರಮಾಣದ ರಾಜಕೀಯ ಮಾಡುವವರೇ ಸ್ಪರ್ಧಿಸುತ್ತಾರೆ ಬಿಟ್ಟರೆ ಸಾಮಾನ್ಯ ಶಿಕ್ಷಕ ಗೆದ್ದು MLC ಆಗಿ ಶಿಕ್ಷಕರ ಧ್ವನಿ ಆಗುವುದು ಅಸಾಧ್ಯದ ಮಾತೇ ಸರಿ .
ಪ್ರೈವೇಟ್ ಕಾಲೇಜುಗಳಲ್ಲಿ ಇಂದಿಗೂ 15 ಸಾವಿರಕ್ಕೂ ದುಡಿಯುವ ಸಾವಿರಾರು ಶಿಕ್ಷಕರಿದ್ದಾರೆ ಹಾಗೆಯೇ ವರ್ಷಕ್ಕೆ 25 ಲಕ್ಷ ದುಡಿಯುವವರೂ ಇದ್ದಾರೆ.ಮೇಲ್ನೋಟಕ್ಕೆ ಈ ತಾರತಮ್ಯಕ್ಕೆ ಶಿಕ್ಷಕರ ಗುಣಮಟ್ಟ ಕಾರಣ ಎನಿಸಿದರೂ ಶಿಕ್ಷಕರನ್ನು ಸಮಾಜವು ನಡೆಸಿಕೊಳ್ಳುವ ರೀತಿಯನ್ನು ಬಿಂಬಿಸುತ್ತದೆ.

ಶಿಕ್ಷಕರೂ BMW / LAMBORGHINI ಯಲ್ಲಿ ಓಡಾಡೋ ಹಾಗೆ ಆಗಬೇಕು.
ಕೆಲಸದ ಭದ್ರತೆಗೋಸ್ಕರ ಸರ್ಕಾರಿ ಕೆಲಸ ಸೇರುವವರು ಒಂದು ಕಡೆ ಆದರೆ ಎಷ್ಟೋ ಜನ ಕಡಿಮೆ ಸಂಬಳ ಎನ್ನುವ ಕಾರಣದಿಂದ ಸರ್ಕಾರಿ ವೃತ್ತಿಯನ್ನೇ ತ್ಯಜಿಸಿರುವ ನನ್ನ ಸ್ನೇಹಿತರೇ ತುಂಬಾ ಜನರಿದ್ದಾರೆ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳ ಶಿಕ್ಷಕರ ವೇತನ ಭಾರತೀಯ ಶಿಕ್ಷಕರ ಸರಾಸರಿ ವೇತನದ ಕನಿಷ್ಠ 8 ಪಟ್ಟಿಗಿಂತ ಜಾಸ್ತಿ ಇದೆ. ಶಿಕ್ಷಕ ವೃತ್ತಿ ಪವಿತ್ರ ವೃತ್ತಿ/ಸಮಾಜ ಸೇವೆಗೆ ಉತ್ತಮ ಅವಕಾಶ ಎಂದು ಎಷ್ಟೇ ಹೇಳಿದರೂ ಸಿಂಹಾವಲೋಕನ ಮಾಡಿದಾಗ ಪ್ರತಿ ತಿಂಗಳು ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ಅಥವಾ ಐಎಎಸ್ ದುಡಿಯುವಷ್ಟು ಶಿಕ್ಷಕರಿಗೆ ಬರುವುದಿಲ್ಲ ಎಂದಾದರೆ ಯಾರೊಬ್ಬ ಬುದ್ದಿವಂತ ಕೂಡ ಬೇಸಿಕ್ ಸೈನ್ಸ್ ಕಡೆ ತಿರುಗಿಯೂ ನೋಡುವುದಿಲ್ಲ.
ಕೋಚಿಂಗ್ ಮಾಫಿಯಾ ಎಂದು ನಾನು ವಯಕ್ತಿಕವಾಗಿ Online Platforms/Edtech Firm ಳನ್ನು ಜರೆದರೂ ಈ ಸಂಬಳದ ವಿಚಾರದಲ್ಲಿ ಮೆಚ್ಚಲೇ ಬೇಕು.ಅವರಿಂದ ಒಂದಿಷ್ಟು ಜನ ಶಿಕ್ಷಕರಿಗೆ ಆದರೂ ಬಡ ಶಿಕ್ಷಕ ಎಂಬ ಹಣೆಪಟ್ಟಿ ಕಳಚಿಡುವಂತಾಗಿದೆ. 21 ವರ್ಷದ ಹುಡುಗನಿಗೆ ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ 25-30 ಲಕ್ಷ ಸಂಬಳ ದೊರೆಯುವ ಈ ಕಾಲಘಟ್ಟದ್ಲಲೂ ಬಸ್ಸಿನ ಟಿಕೆಟ್ ಹಾಗು ಮೂರು ಹೊತ್ತಿನ ಊಟಕ್ಕೆ ಆಗುವಷ್ಟು ಮಾತ್ರ ದುಡಿಯುವಂತೆ ಮಾಡುತ್ತದೆ ಎಂದರೆ ಶಿಕ್ಷಣ ಕ್ಷೇತ್ರಕ್ಕೆ ಗುಣಮಟ್ಟ ಇರುವವರು ಬರುತ್ತಾರೆಯೇ ..???
ಪ್ರಪಂಚದ ಎಲ್ಲ ಶಿಕ್ಷಕರಿಗಿಂತ ಉತ್ತಮ ಗುಣಮಟ್ಟದ ಶಿಕ್ಷಕರು ಇರುವ ನಮ್ಮ ದೇಶದಲ್ಲಿಯೂ, ಎಲ್ಲಾ ಶಿಕ್ಷಕ ಹಾಗು ಅವರ ಕುಟುಂಬದವರು BMW / LAMBORGHINI ಯಲ್ಲಿ ಓಡಾಡೋ ಹಾಗೆ ಆಗುವಷ್ಟು ಆರ್ಥಿಕವಾಗಿ ಸಬಲರಾಗಬೇಕು,ಎಲ್ಲಾ ಶಿಕ್ಷಕರಿಗೂ ಐಎಎಸ್ -ಐಪಿಎಸ್ ಅಧಿಕಾರಿಗಳಿಗಿಂತ ಹೆಚ್ಚಿನ ವೇತನ ಕೊಡುವಂತೆ ಈ ಸಮಾಜ ,ಸರ್ಕಾರಗಳು ಬದಲಾಗಬೇಕು ಎನ್ನುವುದು ನಮ್ಮ ಆಶಯ.
Abhishek.N,
Author of NEST KCET Mathematics,
Founder & CEO, Examtech Learning Limited (R.)
NEST PUBLICATIONS(R.)
Karnataka’s Best Publication for NEET and KCET Materials.
