ಯಾರು ಈ ನವದೀಪ್ ಸಿಂಗ್…?
2017 ರ ನೀಟ್ ಪರೀಕ್ಷೆಯಲ್ಲಿ 18 ಲಕ್ಷ ವಿದ್ಯಾರ್ಥಿಗಳ ALL INDIA RANK ಲಿಸ್ಟಿನಲ್ಲಿ 1 ನೇ RANK ಪಡೆದು ಇಡೀ ಭಾರತವೇ ಆತನ ಕಡೆ ತಿರುಗಿ ನೋಡುವಂತೆ ಮಾಡಿ ವಿಶ್ವ ವಿಖ್ಯಾತ ದೆಹಲಿಯ MAMC ಯಲ್ಲಿ ಎರಡನೇ ವರ್ಷದ ರೇಡಿಯೋಲಾಜಿಯಲ್ಲಿ MD ಓದುತ್ತಿದ್ದ ಮಧ್ಯಮ ವರ್ಗದ ಯುವಕ.ಕಾರಣ ಏನೇ ಇದ್ದರೂ ಈ ಬುದ್ದಿವಂತ ದಡ್ಡನ ಆತ್ಮಹತ್ಯೆ ಹಲವು ಶಿಕ್ಷಕರ/ಪೋಷಕರ ಯೋಚನಾ ಲಹರಿಯನ್ನೇ ಬದಲಾಯಿಸಬೇಕಿದೆ.
ವಿಪರ್ಯಾಸ ಅಂದರೆ ಕೇವಲ 25 ವರ್ಷಗಳ ಹಿಂದೆ ಮೂರು ಹೊತ್ತಿನ ಊಟ ಸಿಕ್ಕರೆ ನೆಮ್ಮದಿ ಎಂಬ ಸಮಯ ಒಂದಿತ್ತು.ಆಗ ಕಾಲೇಜಿಗೆ ಅಪ್ಲಿಕೇಶನ್ ಹಿಡಿದು 100 ರೂ Fee ಕಡಿಮೆ ಮಾಡಿಸಲು ಏನೇನು ಮಾಡಬೇಕೆಂದು ವಿದ್ಯಾರ್ಥಿ ದೆಸೆಯಲ್ಲಿಯೇ ಯೋಚಿಸುತ್ತಿದ್ದರಿಂದಲೇ ಇಂದು ನಮ್ಮ ಯೋಚನಾ ಧಾಟಿ ನಮ್ಮ ವಯಸ್ಸಿನವರಿಗಿಂತ ಹೆಚ್ಚಿನ ಮಟ್ಟದಲ್ಲಿರುವುದು.ಆ ಸಮಯದಲ್ಲಿ ಹದಿಹರೆಯದವರಿಗೆ STRESS ಎಂಬ ಪದದ ಅರ್ಥವೇ ಗೊತ್ತಿರಲಿಲ್ಲ.ಪೋಷಕರೇ ಜೀವನದಲ್ಲಿ ಮುಂದಿನ ಒಂದು ನಿಮಿಷದಲ್ಲಿ ನನ್ನ ಸಾವು ಎನಿಸಿದರೂ ಧೈರ್ಯವಾಗಿ ಇರುವ ಮನಸ್ಥಿತಿ ಮಕ್ಕಳಿಗೆ ಕಲಿಸಬೇಕೇ ವಿನಃ ಅವರಿಗೆ ಬರಿಯ MARKS,RANK ಹೇಗೆ ತೆಗೆಯಬೇಕೆಂದು ಕಲಿಸಲು ಪ್ರಯತ್ನಿಸಬೇಡಿ,ಆ ಮನಸ್ಥಿತಿ ಮಾತ್ರ ನಿಮ್ಮ ಮಗ/ಮಗಳು ಒಂದು ಹೆಜ್ಜೆ ಇಡುವಲ್ಲಿ ಎರಡು ಹೆಜ್ಜೆ ಇಡುವ ಹಾಗೆ ಮಾಡಬಲ್ಲದು.

ಈಗಿನ ತಂದೆ ತಾಯಂದಿರು ತಮ್ಮ ಮಕ್ಕಳು ಮಾತನಾಡುವ ENGLISH ACCENT ನೋಡಿ ನನ್ನ ಮಗ/ಮಗಳು PUC ಯಲ್ಲಿ SCIENCE ನಂತರ IIT,AIIMS ಗೇ ಹೋಗಬೇಕು ಎಂದು ತೀರ್ಮಾನ ಮಾಡುತ್ತಾರೆ.ಕೆಲವರಂತೂ NEET/JEE ಎರಡೂ ಕ್ಲಾಸ್ ಗಳಿಗೆ ಸೇರಿಸಿ ಡಾಕ್ಟರ್ – ಇಂಜಿನಿಯರ್ ಎರಡನ್ನೂ ಒಬ್ಬರಲ್ಲೇ ನೋಡ ಬಯಸುತ್ತಾರೆ.
ವರ್ಷಕ್ಕೆ 1.5 ಲಕ್ಷ ಸೀಟಿಗೆ ,25 ಲಕ್ಷ ವಿದ್ಯಾರ್ಥಿಗಳು NEET ಪರೀಕ್ಷೆ ಬರೆಯುತ್ತಾರೆ.ಉಳಿದ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೀವನದಲ್ಲಿ ಸೋಲುತ್ತಾರೆ ಎಂದಲ್ಲ, AIIMS DELHI ಯ Dr. Aman Tilak ಹೇಳುವ ರೀತಿಯಲ್ಲಿ ಸಮಾಜ ಸೇವೆಗೆ ಅಥವ ಹೆಸರು-ಹಣ ಮಾಡಲು ಹಲವಾರು ಹಾದಿಗಳಿವೆ.ಆ ದಾರಿಯಲ್ಲಿ ಇರುವವರು ಮಾನಸಿಕವಾಗಿ ಎಲ್ಲರಿಗಿಂತ ಶಕ್ತಿಶಾಲಿಗಳು ಮಾತ್ರ.ಅಂತಹ ಮಕ್ಕಳು ಮುಂದೆ ತನ್ನ ಕಾಲ ಮೇಲೆ ತಾನೇ ನಿಲ್ಲುವುದಲ್ಲದೆ ಸಾವಿರಾರು ಜನಗಳಿಗೆ ಕೆಲಸ ಕೊಡುವವರಾಗುತ್ತಾರೆ.
ಮಕ್ಕಳಿಗೆ ಮನಸ್ಸಿನ ಸ್ವಂತಿಕೆ ಎಂಬ ಆಸ್ತಿಯನ್ನು ಮಾಡಿದರೆ ಸಾಕು ,ಉಳಿದ ಆಸ್ತಿಯನ್ನು ಅವರೇ ಸಂಪಾದಿಸುತ್ತಾರೆ.ಯಾವುದೇ ದೊಡ್ಡ ಹೆಸರಿರುವ ಕಾಲೇಜಿನಲ್ಲಿ ಡಿಗ್ರಿ ಪಡೆದರು 50 ಸಾವಿರ ಸಂಬಳ ಬರುವ ಕೆಲಸ ಪಡೆದುಕೊಳ್ಳಲು ಕೂಡ ಶಕ್ತರಾಗಿಲ್ಲ ಎಂದರೆ ಪ್ರಪಂಚದ EXPECTATIONS ಬೇರೆಯ ದಿಕ್ಕಿನಲ್ಲೇ ಹೋಗುತ್ತಿದೆ ಎಂದರ್ಥ.

ಮಕ್ಕಳು ತಪ್ಪು ಮಾಡಿದರೆ ಅದನ್ನು ಮಕ್ಕಳಿಗೆ ಅರ್ಥ ಮಾಡಿಸುವುದಕ್ಕೂ ಈಗಿನ ಹಲವು ಪೋಷಕರು ಭಯ ಪಡುತ್ತಾರೆ ಎನ್ನುವುದೇ ದುರಂತ .ಮಕ್ಕಳು ಮನೆಯಲ್ಲಿ ಮೊಬೈಲ್ ಅನ್ನು ಮಿತಿ ಮೀರಿ ಬಳಸುತ್ತಾರೆ ದಯವಿಟ್ಟು ಏನಾದರೂ ಮಾಡಿ ಸರ್ ಎಂದು ಟೀಚರ್ಸ್ ಬಳಿ COMPLAINT ಕೊಡುವುದಲ್ಲದೆ, ನಾವೇ ವಿಚಾರ ತಿಳಿಸಿರುವುದು ಎಂದು ಮಗನಿಗೆ/ಮಗಳಿಗೆ ತಿಳಿಸಬೇಡಿ-ಗಲಾಟೆ ಮಾಡುತ್ತಾನೆ/ಳೆ ಅನ್ನೋ ಮಾತು ಬೇರೆ.ನಿಮ್ಮ ತಂದೆ ತಾಯಿ ನಿಮ್ಮನ್ನು ಇದೇ ತರಹ ಬೆಳೆಸಿದ್ದರೆ ನೀವು ಈ ಹಂತಕ್ಕೆ ಬರಲು ಆಗುತ್ತಿತ್ತೇ ….? ಎಲ್ಲದಕ್ಕೂ ಉತ್ತರ ನಿಮ್ಮಲ್ಲೆ ಇದೆ. ಕೆಲವೊಂದು ಬುದ್ದಿ ಹೇಳಿ ,ಕೆಲವೊಂದು ಗುದ್ದಿ ಹೇಳಿ ಒಟ್ಟಿನಲ್ಲಿ ಮಕ್ಕಳನ್ನು ಗಟ್ಟಿಯಾಗಿ ಬೆಳೆಸಿ.
ಸಲಹೆಗಳು:
1.ಮಕ್ಕಳ ಸುಖ-ದುಃಖ ಎಷ್ಟೇ SILLY ಅನಿಸಿದರೂ ದಿನಕ್ಕೆ 5 ನಿಮಿಷ ಆದರೂ ಕೇಳಿ.
2.ನಿಮ್ಮ ಸಮಸ್ಯೆಗಳು ಅವರಿಂದ ಪರಿಹರಿಸಲು ಆಗುವುದಿಲ್ಲ ಅನಿಸಿದರೂ ನಿಮ್ಮ FAMILY ಯ ಮುಂದಿನ ವಾರಸುದಾರಾದ ಮಕ್ಕಳ ಮುಂದೆ ಹೇಳಿಕೊಳ್ಳಿ. ಇದರಿಂದ ನಿಮ್ಮ ಮಕ್ಕಳಲ್ಲಿ ಎಲ್ಲವೂ ಸುಲಭವಾಗಿ ಬರುವುದಿಲ್ಲ ಎಂಬ ಮನೋಭಾವ ಬೆಳೆಸುತ್ತದೆ.ಹಾಗೆಯೇ ಎಲ್ಲರಿಗೂ ಅವರದೇ ಆದ ಸಮಸ್ಯೆಗಳು ಇರುತ್ತದೆ ಎಂದು ತೋರಿಸುತ್ತದೆ.
3.ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ರೂಡಿಸಿಕೊಳ್ಳಿ,ಊಟದ ಸಮಯದಲ್ಲಿ ನಿಮ್ಮ ನೆಂಟರಿಷ್ಟರು,ಸ್ನೇಹಿತರ ಬಗ್ಗೆ ಹಾಗು ಅವರ ಏಳಿಗೆ ಬಗ್ಗೆ ಅಸೂಹೆ ಇಲ್ಲದ ರೀತಿಯಲ್ಲಿ ಮಕ್ಕಳೊಟ್ಟಿಗೆ ಮಾತನಾಡಿ ,ಇದರಿಂದ ಮಕ್ಕಳ EQ (Emotional Quotient) ವೃದಿಸುತ್ತದೆ.ಯಾರಲ್ಲಿ EQ ಜಾಸ್ತಿ ಇರುತ್ತದೋ ಅವರು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ.
Abhishek.N,
Author of NEST KCET Mathematics,
Founder & CEO, Examtech Learning Limited (R.)
NEST PUBLICATIONS(R.)
Karnataka’s Best Publication for NEET and KCET Materials.
