“ಲಿಯೋನ್ಹಾರ್ಡ್ ಆಯ್ಲರ್”

“Logic is the foundation of the certainty of all the knowledge we acquire”-Leonhard Euler. 

ಗಣಿತ ಉಪನ್ಯಾಸಕನಾದ ನನಗೆ ಲಿಯೋನ್ಹಾರ್ಡ್ ಆಯ್ಲರ್ (1707-1783) ಬಗ್ಗೆ ಲೇಖನ ಬರಿಯಬೇಕು ಎಂದರೆ ಏನೋ ಒಂದು ತರಹದ ಸಂತೋಷ.ಇವರು ಎಲ್ಲಾ ಗಣಿತಜ್ಞರಿಗೂ ಒಂದು ಸ್ಪೂರ್ಥಿಯ ಚಿಲುಮೆ.18 ನೇ ಶತಮಾನದ ಅತಿದೊಡ್ಡ ಗಣಿತ ಶಾಸ್ತ್ರಜ್ಞರಲ್ಲಿ ಆಯ್ಲರ್ ಒಬ್ಬರು .ಲಿಯೋನ್ಹಾರ್ಡ್ ಆಯ್ಲರ್ ಅವರು 15 ಏಪ್ರಿಲ್ 1707 ರಂದು ಸ್ವಿಜರ್ಲ್ಯಾಂಡ ನ ಬಸೆಲ್ನಲ್ಲಿ ಜನಿಸಿದರು. ಆಯ್ಲರ್ ಅವರ ಔಪಚಾರಿಕ ಶಿಕ್ಷಣ ಬಸೆಲ್ನಲ್ಲಿ ಪ್ರಾರಂಭವಾಯಿತು.
1726 ರಲ್ಲಿ ಆಯ್ಲರ್ ಡಿ ಸೊನೋ ಶೀರ್ಷಿಕೆಯೊಂದಿಗೆ ಧ್ವನಿಯ ಪ್ರಸರಣದ ಬಗ್ಗೆ ಒಂದು ಪ್ರಬಂಧವನ್ನು ಪೂರ್ಣಗೊಳಿಸಿದರು.ಆದರೆ ಈ ಪ್ರಬಂಧ ಅವರಿಗೆ ಬ್ಯಾಸೆಲ್ ವಿಶ್ವವಿದ್ಯಾಲಯದಲ್ಲಿ ಸ್ಥಾನ ಪಡೆಯಲು ಸಹಕಾರಿಯಾಗಲಿಲ್ಲ.1727 ರಲ್ಲಿ, ಅವರು ಮೊದಲ ಬಾರಿಗೆ ಪ್ಯಾರಿಸ್ ಅಕಾಡೆಮಿಯ PROBLEM SOLVING ಸ್ಪರ್ಧೆಯನ್ನು ಪ್ರವೇಶಿಸಿದರು; “ನೌಕಾ ವಾಸ್ತುಶಿಲ್ಪದ ಪಿತಾಮಹ” ಎಂದು ಹೆಸರಾದ ಪಿಯರ್ ಬೌಗರ್ ಪ್ರಥಮ ಬಹುಮಾನ ಗಳಿಸಿದರು ಮತ್ತು ಆಯ್ಲರ್ ಎರಡನೇ ಸ್ಥಾನ ಪಡೆದರು.ನಂತರ ಆಯ್ಲರ್ ಈ ವಾರ್ಷಿಕ ಪ್ರಶಸ್ತಿಯನ್ನು ಹನ್ನೆರಡು ಬಾರಿ ಗೆದ್ದರು.

1735 ರಲ್ಲಿ ಆಯ್ಲರ್ ತೀವ್ರ ಜ್ವರದ ಪರಿಣಾಮವಾಗಿ ತಮ್ಮ ಬಲಗಣ್ಣಿನ ದೃಷ್ಠಿ ಕಳೆದುಕೊಂಡರು.ಇದಾದ ಒಂದು ವರ್ಷದಲ್ಲಿ ಏಡಕಾಣ್ಣಿಗೆ ಪೊರೆ ಆವರಿಸಿತು. ಆದಾಗ್ಯೂ ಇವರಲ್ಲಿದ್ದ ಗಣಿತದ ಮೇಲಿನ ಆಸಕ್ತಿ ಕುಂದಲಿಲ್ಲ.

ಅವರು ಇಪ್ಪತ್ತೈದು ವರ್ಷಗಳ ಕಾಲ ಬರ್ಲಿನ್ನಲ್ಲಿದ್ದರು, ಅಲ್ಲಿ 380 ಕ್ಕೂ ಹೆಚ್ಚು ಲೇಖನಗಳನ್ನು ಬರೆದರು. 1748 ರಲ್ಲಿ ಅನಾಲಿಸಿನ್ ಇನ್ಫಿನಿಟೊರಮ್ ಮತ್ತು 1755 ರಲ್ಲಿ ಡಿಫರೆನ್ಷಿಯಲ್ ಕ್ಯಾಲ್ಕುಲಸ್ನಲ್ಲಿ ಪ್ರಕಟವಾದ ಇನ್ಸ್ಟ್ರುಟಿಷನ್ಸ್ ಕ್ಯಾಲ್ಕುರಿ ಡಿಫರೆನ್ಷಿಯಲಿಸ್ ಎಂಬ ಎರಡು ಕೃತಿಗಳನ್ನು ಪ್ರಕಟಿಸಿದ್ದಕ್ಕಾಗಿ ಹೆಚ್ಚು ಪ್ರಖ್ಯಾತರಾದರು. ಅವರು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ನ ವಿದೇಶಿ ಸದಸ್ಯರಾಗಿ ಆಯ್ಕೆಯಾದರು.

ಆಯ್ಲರ್ ಬಹುತೇಕ ಎಲ್ಲಾ ಗಣಿತಶಾಸ್ತ್ರದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಕಲನಶಾಸ್ತ್ರದಲ್ಲಿ (Calculus) Eular Number , e= 2.71828 ರ ಸಮನಾಗಿರುತ್ತದೆ ಮತ್ತು Eular Constant γ ( ಗಾಮಾ ) ಕೆಲವೊಮ್ಮೆ ಸ್ಥಿರ ಎಂದು ಉಲ್ಲೇಖಿಸಿದ್ದಾರೆ. ತಮ್ಮ ಹಲವಾರು ಮತ್ತು ವ್ಯಾಪಕವಾಗಿ ಪ್ರಸಾರವಾದ ಪಠ್ಯಪುಸ್ತಕಗಳ ಮೂಲಕ ಆಯ್ಲರ್ ಅನೇಕ ಪ್ರಮಾಣಿತ ಸಂಪ್ರದಾಯಗಳನ್ನು ಪರಿಚಯಿಸಿ ಜನಪ್ರಿಯಗೊಳಿಸಿದರು. ಒಂದು ಸ್ಥಿರ ಸಂಖ್ಯೆಯನ್ನು ಪ್ರಪಂಚ ತನ್ನ ಹೆಸರಿಂದ ಕರಿಯಲ್ಪಡುತ್ತದೆ ಎಂದರೆ ಎಷ್ಟು ಹೆಮ್ಮೆಯ ಸಂಗತಿಯಲ್ಲವೆ? ಬಹು ಮುಖ್ಯವಾಗಿ F ( x ) ಅನ್ನು ಮೊದಲ ಬಾರಿಗೆ ಆರ್ಗ್ಯುಮೆಂಟ್ X ಗೆ ಅನ್ವಯಿಸಿದ ಕಾರ್ಯಸೂಚಿಯನ್ನು ಸೂಚಿಸಿದರು ಮತ್ತು ತ್ರಿಕೋನಮಿತಿಯ ಕಾರ್ಯಗಳಿಗೆ ಆಧುನಿಕ ಸಂಕೇತವನ್ನು ಸಹ ಪರಿಚಯಿಸಿದರು.

1783 ರ ಸೆಪ್ಟೆಂಬರ್ 18 ರಂದು ಸೇಂಟ್ ಪೀಟರ್ಸ್ಬರ್ಗ್ನಲ್ಲಿ, ತನ್ನ ಕುಟುಂಬದೊಂದಿಗೆ ಊಟ ಮಾಡಿದ ನಂತರ ಆಯ್ಲರ್ ಹೊಸದಾಗಿ ಪತ್ತೆಯಾದ ಗ್ರಹ ಯುರೇನಸ್ ಮತ್ತು ಅದರ ಕಕ್ಷೆಯ ಬಗ್ಗೆ ಚರ್ಚಿಸುತ್ತಿದ್ದರು, ಆ ಸಮಯದಲ್ಲಿ ಮೆದುಳಿನ ರಕ್ತಸ್ರಾವದಿಂದ ಕುಸಿದುಬಿದ್ದು ನಿಧನರಾದರು. ಗೋಲೋಡೆ ದ್ವೀಪದಲ್ಲಿರುವ ಸ್ಮೋಲೆನ್ಸ್ಕ್ ಲುಥೆರನ್ ಸ್ಮಶಾನದಲ್ಲಿ ಆಯ್ಲರ್ ಕ್ಯಾಥರಿನಾ ಬಳಿ ಇವರನ್ನು ಮಣ್ಣು ಮಾಡಲಾಯಿತು. 1785 ರಲ್ಲಿ, ರಷ್ಯನ್ ಅಕಾಡೆಮಿ ಆಫ್ ಸೈನ್ಸ್ ವತಿಯಿಂದ ಲಿಯೋನಾರ್ಡ್ ಆಯ್ಲರ್ ರ ಅಮೃತಶಿಲೆ ಬಸ್ಟ್ ಅನ್ನು ಪೀಠದ ಮೇಲೆ ಇರಿಸಿತು ಮತ್ತು 1837 ರಲ್ಲಿ ಆಯ್ಲರ್ ರ ಸಮಾಧಿಯ ಮೇಲೆ ಹೆಡ್ ಸ್ಟೋನ್ ಅನ್ನು ಇರಿಸಿತು.

ಲೇಖಕರು ,
ಕೃಷ್ಣ ಚೈತನ್ಯ ,

ಗಣಿತ ಉಪನ್ಯಾಸಕರು,ತುರುವೇಕೆರೆ


NEST PUBLICATIONS(R.)

Karnataka’s Best Publication for NEET and KCET Materials.



error: Content is protected !!